Home / ಬೆಳಗಾವಿ / ಕಬ್ಬು ದರ ಹೋರಾಟ : ಡಿಸಿ ಕಚೇರಿಗೆ ಬೀಗ ಹಾಕಲು...

ಕಬ್ಬು ದರ ಹೋರಾಟ : ಡಿಸಿ ಕಚೇರಿಗೆ ಬೀಗ ಹಾಕಲು ಮುಂದಾದ ರೈತರು

B
By B News Desk
November 4, 2026 0 comments Edit Article

ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ಕಬ್ಬು ಬೆಳೆಗಾರರ ಆಕ್ರೋಶ ಮುಗಿಲು ಮುಟ್ಟಿದ್ದು, ಡಿಸಿ ಕಚೇರಿಗೆ ಬೀಗ ಹಾಕಲು ಯತ್ನಿಸಿದಾಗ ಪೊಲೀಸರೊಂದಿಗೆ ವಾಗ್ವಾದ ಮತ್ತು ತಳ್ಳಾಟ ನಡೆದಿದೆ.

ಈ ಲೇಖನವನ್ನು ಆಲಿಸಿ TTS AI

2 ನಿಮಿಷಗಳ ಓದು • 184 ಪದಗಳು (ಸಿದ್ಧವಾಗಿದೆ)
ಅಕ್ಷರ ಗಾತ್ರ:
ವೇಗ:
ಕಬ್ಬು ದರ ಹೋರಾಟ : ಡಿಸಿ ಕಚೇರಿಗೆ ಬೀಗ ಹಾಕಲು ಮುಂದಾದ ರೈತರು
ಬೆಳಗಾವಿ: ಕಬ್ಬು ಬೆಳೆಗೆ ಸೂಕ್ತ ಬೆಳೆ ನಿಗದಿಪಡಿಸುವಂತೆ ಆಗ್ರಹಿಸಿ ಹಾಗೂ ಜಿಲ್ಲಾಡಳಿತದ ಧೋರಣೆ ಖಂಡಿಸಿ ಅನ್ನದಾತರು ನಡೆಸಿದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯ ಮುಖ್ಯ ದ್ವಾರಕ್ಕೆ ಬೀಗ ಹಾಕಲು ಯತ್ನಿಸಿದ ವೇಳೆ ರೈತರು ಹಾಗೂ ಪೊಲೀಸರ ನಡುವೆ ತೀವ್ರ ವಾಗ್ವಾದ ಮತ್ತು ನೂಕಾಟ-ತಳ್ಳಾಟ ನಡೆದಿದೆ. ಈ ಘಟನೆಯಲ್ಲಿ ಓರ್ವ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ. ಪ್ರತಿಭಟನೆಯ ನೇತೃತ್ವ ವಹಿಸಿದ್ದ ರೈತ ಮುಖಂಡ ಗಣೇಶ ಇಳಿಗೇರ್ ಮಾತನಾಡಿ, "ನೀಡಿದ ಭರವಸೆಯಂತೆ ಕೂಡಲೇ ಸಭೆ ನಡೆಸಿ ಕಬ್ಬಿಗೆ ವೈಜ್ಞಾನಿಕ ದರ ನಿಗದಿ ಮಾಡಬೇಕು. ಆದರೆ ಅಧಿಕಾರಿಗಳು ಯಾವುದೇ ಸ್ಪಂದನೆ ನೀಡದೆ ಕಾಲಹರಣ ಮಾಡುತ್ತಿದ್ದಾರೆ" ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬೆಳಿಗ್ಗೆಯಿಂದಲೂ ಕಚೇರಿ ಎದುರು ಕಾದು ಕುಳಿತರೂ ಅಧಿಕಾರಿಗಳು ಸಭೆ ನಡೆಸಲು ಮುಂದಾಗದಿರುವುದಕ್ಕೆ ರೈತರು ಆಕ್ರೋಶಗೊಂಡರು. ರೈತರ ಆಕ್ರೋಶ ಮತ್ತು ಎಚ್ಚರಿಕೆ: ಜಿಲ್ಲಾಡಳಿತದ ಈ ನಿರ್ಲಕ್ಷ್ಯ ಧೋರಣೆ ಮುಂದುವರಿದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ. ಕೂಡಲೇ ಬೇಡಿಕೆ ಈಡೇರಿಸದಿದ್ದರೆ ಕೆಲವೇ ಕ್ಷಣಗಳಲ್ಲಿ ನಗರದ ಪ್ರಮುಖ ಚೆನ್ನಮ್ಮ ಸರ್ಕಲ್ ಬಂದ್ ಮಾಡಲಾಗುವುದು ಎಂದು ಮುಖಂಡರು ಎಚ್ಚರಿಸಿದ್ದಾರೆ. ಅಲ್ಲದೆ, ಮುಂಬರುವ ದಿನಗಳಲ್ಲಿ ಸಕ್ಕರೆ ಕಾರ್ಖಾನೆಗಳಿಗೆ ಮುತ್ತಿಗೆ ಹಾಕಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ರವಚಿಸಿದ್ದಾರೆ.
"ನಾವು ಬದುಕುಳಿಯಲು ನಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದೇವೆ. ಸರ್ಕಾರ ಮತ್ತು ಅಧಿಕಾರಿಗಳು ನಮ್ಮ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕು," ಎಂದು ಪ್ರತಿಭಟನಾ ನಿರತ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಘಟನಾ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಮುಂದುವರೆದಿದ್ದು, ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿ ಪರಿಸ್ಥಿತಿ ಹತೋಟಿಗೆ ತರಲು ಪ್ರಯತ್ನಿಸಲಾಗುತ್ತಿದೆ.
ಹಕ್ಕುತ್ಯಾಗ
ಈ ಲೇಖನವು AI ಬಳಸಿ ರಚಿತವಾಗಿರಬಹುದು, ಸಂಪಾದಿಸಿರಬಹುದು ಅಥವಾ ಅನುವಾದಿಸಿರಬಹುದು ಹಾಗೂ ಇದರಲ್ಲಿ ವಾಸ್ತವಾಂಶ, ಭಾಷಾಂತರ ಅಥವಾ ಸಾಂದರ್ಭಿಕ ದೋಷಗಳಿರಬಹುದು. ಪ್ರಮುಖ ಮಾಹಿತಿಯನ್ನು ಅಧಿಕೃತ ಮೂಲಗಳಿಂದ ದೃಢಪಡಿಸಿಕೊಳ್ಳಲು ಓದುಗರಿಗೆ ಸಲಹೆ ನೀಡಲಾಗುತ್ತದೆ. AI-ನೆರವಿನ ವಿಷಯದಿಂದ ಉಂಟಾಗುವ ಯಾವುದೇ ತಪ್ಪುಗಳಿಗೆ ಪ್ರಕಾಶಕರು ಜವಾಬ್ದಾರರಾಗಿರುವುದಿಲ್ಲ. ಕಾನೂನು ಹಕ್ಕುತ್ಯಾಗ
TAGS: ಬೆಳಗಾವಿ ಸುದ್ದಿ ರೈತ ಪ್ರತಿಭಟನೆ ಕಬ್ಬು ಬೆಳೆಗಾರರು ಜಿಲ್ಲಾಧಿಕಾರಿ ಕಚೇರಿ ಕರ್ನಾಟಕ ನ್ಯೂಸ್ Belagavi News
SHARE THIS ARTICLE
B

B News Desk

Senior Staff Journalist and Correspondent at B News. Covering breaking global stories, contemporary culture, and modern innovations.

B News Live Search

Search Articles

Type any keyword to instantly search stories across categories.
Send News