"ಸರ್ಕಾರದ ಬಳಿ ಹಣವಿಲ್ಲ ಎನ್ನುವುದಾದರೆ ನಾವು ರಾಜ್ಯ ಸರ್ಕಾರದ ಖಜಾನೆ ತುಂಬಿಸಲು ಭಿಕ್ಷೆ ಬೇಡಿಯಾದರೂ ಹಣ ಸಂಗ್ರಹಿಸಿ ಕೊಡುತ್ತೇವೆ. ಇದು ಸರ್ಕಾರದ ಕಣ್ಣು ತೆರೆಸುವ ಎಚ್ಚರಿಕೆ ಅಷ್ಟೇ," ಎಂದು ಆಕ್ರೋಶಿತ ರೈತರು ಎಚ್ಚರಿಕೆ ನೀಡಿದ್ದಾರೆ.ಪ್ರತಿಭಟನೆಯಲ್ಲಿ ನೂರಾರು ಸಂಖ್ಯೆಯಲ್ಲಿ ಕಬ್ಬು ಬೆಳೆಗಾರರು ಭಾಗವಹಿಸಿದ್ದು, ಕೂಡಲೇ ಸರ್ಕಾರ ಮಧ್ಯಪ್ರವೇಶಿಸಿ ವೈಜ್ಞಾನಿಕ ಬೆಲೆ ಹಾಗೂ ಎಸ್‌ಎಪಿ ನಿಗದಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಸ್ಥಳದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.
ಬೆಳಗಾವಿ: ಕಬ್ಬು ಎಸ್.ಎ.ಪಿ ನಿಧಿಗೆ ಹಣವಿಲ್ಲ ಎಂದ ಡಿಸಿಎಂ; ಭಿಕ್ಷಾಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ರೈತರು
ಕಬ್ಬಿಗೆ ಎಸ್‌ಎಪಿ ನಿಗದಿ ಮಾಡಲು ಸರ್ಕಾರದ ಬಳಿ ಹಣವಿಲ್ಲ ಎಂದ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆ ಖಂಡಿಸಿ ಬೆಳಗಾವಿಯ ಅಥಣಿಯಲ್ಲಿ ರೈತರು ಭಿಕ್ಷಾಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಲೇಖನವನ್ನು ಆಲಿಸಿ TTS AI
B News Desk
Senior Staff Journalist and Correspondent at B News. Covering breaking global stories, contemporary culture, and modern innovations.