"ನನ್ನ ಪತ್ನಿಗೆ ಹೆರಿಗೆಯಾಗಿದೆ, ಆಕೆಯನ್ನು ನೋಡಲು ಒಳಗಡೆ ಹೋಗುತ್ತಿದ್ದೇನೆ"ಎಂದು ನೆಪ ಹೇಳಿ ಜಾರಿಕೊಳ್ಳಲು ಯತ್ನಿಸಿದ್ದಾನೆ. ಆದರೆ ಆತನ ಗೊಂದಲಮಯ ನಡವಳಿಕೆ ಹಾಗೂ ತೊಟ್ಟಿದ್ದ ಬಟ್ಟೆಯ ವೈಖರಿಯಿಂದ ಅನುಮಾನಗೊಂಡ ಕಲ್ಮೇಶ ಹುಕಳಿ ಅವರು ತಕ್ಷಣವೇ ಆತನನ್ನು ತೀವ್ರ ತಪಾಸಣೆಗೆ ಒಳಪಡಿಸಿದಾಗ ಜೇಬಿನಲ್ಲಿ ಬಾಂಚಿಟ್ಟಿದ್ದ ಅಪಾರ ಪ್ರಮಾಣದ ಗಾಂಜಾ ಮತ್ತು ಚರಸ್ ಪತ್ತೆಯಾಗಿದೆ. ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು: ಘಟನೆ ನಡೆದ ತಕ್ಷಣವೇ ಗೃಹ ರಕ್ಷಕ ಸಿಬ್ಬಂದಿ ಎಪಿಎಂಸಿ (APMC) ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಎಪಿಎಂಸಿ ಪೊಲೀಸರು ಆರೋಪಿ ಅಬ್ದುಲ್ ಬೇಪಾರಿಯನ್ನು ವಶಕ್ಕೆ ಪಡೆದು, ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿ ಹೆರಿಗೆ ಆಸ್ಪತ್ರೆಗೆ ಮಾದಕ ವಸ್ತು ತಂದಿದ್ದರ ಉದ್ದೇಶವೇನು ಮತ್ತು ಈ ಜಾಲದಲ್ಲಿ ಇನ್ಯಾರೆಲ್ಲ ಭಾಗಿಯಾಗಿದ್ದಾರೆ ಎಂಬ ಕೋನದಲ್ಲಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಬೆಳಗಾವಿ BIMS ಹೆರಿಗೆ ಆಸ್ಪತ್ರೆಯಲ್ಲಿ ಮಾದಕ ವಸ್ತು ಪೂರೈಕೆ ಸಂಚು: 5 ಪ್ಯಾಂಟ್ ಧರಿಸಿ ಬಂದಿದ್ದ ಕಿಲಾಡಿ ಬಂಧನ!
ಬೆಳಗಾವಿಯ ಬಿಮ್ಸ್ ಹೆರಿಗೆ ಆಸ್ಪತ್ರೆ ಆವರಣದಲ್ಲಿ ಗಾಂಜಾ ಹಾಗೂ ಚರಸ್ ಇಟ್ಟುಕೊಂಡು ಬಂದಿದ್ದ ಆರೋಪಿ ಅಬ್ದುಲ್ ಬೇಪಾರಿಯನ್ನು ಗೃಹ ರಕ್ಷಕ ಸಿಬ್ಬಂದಿ ಚಾಣಾಕ್ಷತನದಿಂದ ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.
ಈ ಲೇಖನವನ್ನು ಆಲಿಸಿ TTS AI
B News Desk
Senior Staff Journalist and Correspondent at B News. Covering breaking global stories, contemporary culture, and modern innovations.