Home / ಬೆಳಗಾವಿ / ಬೆಳಗಾವಿಯಲ್ಲಿ ಕಬ್ಬು ದರ ವಿವಾದ: ಸಕ್ಕರೆ ಮಾರಾ...

ಬೆಳಗಾವಿಯಲ್ಲಿ ಕಬ್ಬು ದರ ವಿವಾದ: ಸಕ್ಕರೆ ಮಾರಾಟ ಸೂತ್ರದಡಿ ರೈತರಿಗೆ ₹4,000 ವರೆಗೆ ಬೆಲೆ - ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ

B
By B News Desk
November 14, 2026 0 comments Edit Article

ಕಬ್ಬು ದರ ವಿವಾದ ಮತ್ತು ಸಕ್ಕರೆ ಮಾರಾಟ ಸೂತ್ರದ ಕುರಿತು ಸಚಿವ ಸತೀಶ್ ಜಾರಕಿಹೊಳಿ ಮಹತ್ವದ ಸ್ಪಷ್ಟನೆ ನೀಡಿದ್ದು, ಜಿಲ್ಲೆ ವಿಭಜನೆ ಹಾಗೂ ರಾಜಕೀಯ ಬೆಳವಣಿಗೆಗಳ ಬಗ್ಗೆಯೂ ಮಾತನಾಡಿದ್ದಾರೆ.

ಈ ಲೇಖನವನ್ನು ಆಲಿಸಿ TTS AI

2 ನಿಮಿಷಗಳ ಓದು • 299 ಪದಗಳು (ಸಿದ್ಧವಾಗಿದೆ)
ಅಕ್ಷರ ಗಾತ್ರ:
ವೇಗ:
ಬೆಳಗಾವಿಯಲ್ಲಿ ಕಬ್ಬು ದರ ವಿವಾದ: ಸಕ್ಕರೆ ಮಾರಾಟ ಸೂತ್ರದಡಿ ರೈತರಿಗೆ ₹4,000 ವರೆಗೆ ಬೆಲೆ - ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ
ಬೆಳಗಾವಿ: ಕಬ್ಬು ಖರೀದಿ ದರ ಮತ್ತು ಸಕ್ಕರೆ ಮಾರಾಟದ ಲಾಭಾಂಶ ಸೂತ್ರದ ಕುರಿತು ರಾಜ್ಯದಲ್ಲಿ ಕೇಳಿಬರುತ್ತಿರುವ ಚರ್ಚೆಗಳಿಗೆ ಸ್ಪಷ್ಟನೆ ನೀಡಿರುವ ಸಚಿವ ಸತೀಶ್ ಜಾರಕಿಹೊಳಿ, ಕಬ್ಬಿನ ರಿಕವರಿ ಆಧಾರದ ಮೇಲೆ ದರ ನಿಗದಿಪಡಿಸಲಾಗುತ್ತಿದ್ದು, ಸಕ್ಕರೆ ಮಾರಾಟವು ಪ್ರತಿ ಕ್ವಿಂಟಲ್ ಗೆ ರೂ. 50 ಮೇಲ್ಪಟ್ಟು ಮಾರಾಟವಾದರೆ ರೈತರಿಗೆ ರೂ. 4,000 ವರೆಗೆ ಬೆಲೆ ಸಿಗಲಿದೆ ಎಂದು ತಿಳಿಸಿದ್ದಾರೆ. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರಂಭದಿಂದಲೂ ರೈತರ ಹೋರಾಟಕ್ಕೆ ಸರ್ಕಾರ ಸ್ಪಂದಿಸುತ್ತ ಬಂದಿದೆ. ನಾವು ಕೂಡ ಹಿಂದೆ ರೂ. 45 ಬೇಸ್ ಇಟ್ಟುಕೊಂಡು ರೂ. 3,600 ದರ ನಿಗದಿ ಮಾಡಿದ್ದೆವು. ಈಗ ಸಕ್ಕರೆ ಮಾರಾಟದ ಹೊಸ ಫಾರ್ಮುಲಾ ಅಡಿ ದರ ಘೋಷಣೆ ಮಾಡಲಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಬ್ಬಿನ ರಿಕವರಿ ಆಧಾರದ ಮೇರೆಗೆ ದರಗಳಲ್ಲಿ ವ್ಯತ್ಯಾಸವಿರುತ್ತದೆ. ಏಕರೂಪದಲ್ಲಿ ದರ ಕಲ್ಪಿಸಲು ಸಾಧ್ಯವಿಲ್ಲ ಎಂದರು. ಬೆಳಗಾವಿ ಜಿಲ್ಲೆ ವಿಭಜನೆ ಬಗ್ಗೆ ಸಚಿವರ ಮಾತು: ಬೆಳಗಾವಿ ಜಿಲ್ಲೆ ವಿಭಜನೆ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, ಜಿಲ್ಲೆ ವಿಭಜನೆಯಾಗಬೇಕು ಎಂಬ ಪ್ರಸ್ತಾಪವಿದ್ದು, ಗೋಕಾಕ ಮತ್ತು ಚಿಕ್ಕೋಡಿ ಜಿಲ್ಲೆಗಳ ರಚನೆಗೆ ಬೇಡಿಕೆಯಿದೆ. ಆದರೆ ಅಧಿವೇಶನ ಬರುವಾಗ ಬೈಲಹೊಂಗಲ, ಅಥಣಿ ಹಾಗೂ ರಾಮದುರ್ಗ ಸೇರಿದಂತೆ ಎಲ್ಲಡೆಯಿಂದಲೂ ಪ್ರತ್ಯೇಕ ಜಿಲ್ಲೆಗೆ ಬೇಡಿಕೆ ಬರುತ್ತಿದೆ. ಒಮ್ಮತ ಮೂಡದ ಕಾರಣ ವಿಳಂಬವಾಗುತ್ತಿದೆ ಎಂದು ಸ್ಪಷ್ಟಪಡಿಸಿದರು. ಸುವರ್ಣ ವಿಧಾನಸೌಧ ವಿದ್ಯುತ್ ಬಿಲ್ ಹಾಗೂ ರಾಜಕೀಯ ವಾಗ್ದಾಳಿ: ಸುವರ್ಣ ವಿಧಾನಸೌಧದ ವಿದ್ಯುತ್ ಬಿಲ್ ಬಾಕಿ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದ ಐದು ವಿದ್ಯುತ್ ಸರಬರಾಜು ಸಂಸ್ಥೆಗಳಿಗೆ ಒಟ್ಟು ರೂ. 10,000 ಕೋಟಿ ಬಾಕಿ ಇದೆ. ಆದರೆ ಸುವರ್ಣ ವಿಧಾನಸೌಧದ ಕಡೆಯಿಂದ ಕೇವಲ ರೂ. 11 ಲಕ್ಷ ಮಾತ್ರ ಬಾಕಿ ಉಳಿದಿದೆ ಎಂದು ಅಂಕಿಅಂಶಗಳನ್ನು ಮುಂದಿಟ್ಟರು.
ರಸ್ತೆ ಗುಂಡಿ ಮುಚ್ಚದಿದ್ದರೆ ಬಿಜೆಪಿ ಶಾಸಕರು ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ಮಹಾನಗರ ಪಾಲಿಕೆಯಲ್ಲಿ ಆಡಳಿತ ಯಾರದ್ದು ಎಂಬುದನ್ನು ಮೊದಲು ಗಮನಿಸಲಿ. ಅವರ ಅಧಿಕಾರ ಅವಧಿಯಲ್ಲಿ ದಕ್ಷಿಣ ಕ್ಷೇತ್ರಕ್ಕೆ ಶೇ. 70 ರಷ್ಟು ಅನುದಾನ ಪಡೆದುಕೊಂಡಿದ್ದಾರೆ. ಆದರೆ ಉತ್ತರದಲ್ಲಿ ಬಿಜೆಪಿ ಶಾಸಕರಿದ್ದರೂ ಸರಿಯಾಗಿ ಅನುದಾನ ಕೊಟ್ಟಿಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಕೇಂದ್ರ ಅನುದಾನ ಹಾಗೂ ಪಾಲಿಕೆ ತೆರಿಗೆ ಸೋರಿಕೆ: ಪ್ರತಿಯೊಂದಕ್ಕೂ ರಾಷ್ಟ್ರಪತಿಗಳು ಮತ್ತು ರಾಜ್ಯಪಾಲರಿಗೆ ಪತ್ರ ಬರೆಯುವ ವಿಪಕ್ಷಗಳ ನಾಯಕರ ಧಾಟಿಯನ್ನು ಟೀಕಿಸಿದ ಅವರು, ಮೊದಲು ಕೇಂದ್ರದಿಂದ ಬರಬೇಕಾದ ಅನುದಾನವನ್ನು ತರಲಿ. ಜಲಜೀವನ್ ಮಿಷನ್ (JJM) ಯೋಜನೆಯಡಿ ಕೇಂದ್ರ ಸರ್ಕಾರದಿಂದ ಬರಬೇಕಿರುವ ರೂ. 10,000 ಕೋಟಿ ಅನುದಾನದ ಬಗ್ಗೆಯೂ ಮಾತನಾಡಲಿ ಎಂದು ತಿರುಗೇಟು ನೀಡಿದರು. ಅಲ್ಲದೆ, ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ತೆರಿಗೆ ಸೋರಿಕೆಗೆ ಕಡಿವಾಣ ಹಾಕಲು ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಹಕ್ಕುತ್ಯಾಗ
ಈ ಲೇಖನವು AI ಬಳಸಿ ರಚಿತವಾಗಿರಬಹುದು, ಸಂಪಾದಿಸಿರಬಹುದು ಅಥವಾ ಅನುವಾದಿಸಿರಬಹುದು ಹಾಗೂ ಇದರಲ್ಲಿ ವಾಸ್ತವಾಂಶ, ಭಾಷಾಂತರ ಅಥವಾ ಸಾಂದರ್ಭಿಕ ದೋಷಗಳಿರಬಹುದು. ಪ್ರಮುಖ ಮಾಹಿತಿಯನ್ನು ಅಧಿಕೃತ ಮೂಲಗಳಿಂದ ದೃಢಪಡಿಸಿಕೊಳ್ಳಲು ಓದುಗರಿಗೆ ಸಲಹೆ ನೀಡಲಾಗುತ್ತದೆ. AI-ನೆರವಿನ ವಿಷಯದಿಂದ ಉಂಟಾಗುವ ಯಾವುದೇ ತಪ್ಪುಗಳಿಗೆ ಪ್ರಕಾಶಕರು ಜವಾಬ್ದಾರರಾಗಿರುವುದಿಲ್ಲ. ಕಾನೂನು ಹಕ್ಕುತ್ಯಾಗ
TAGS: Satish Jarkiholi Belagavi News Sugarcane Price Suvarna Soudha Karnataka Politics Belagavi District Division
SHARE THIS ARTICLE
B

B News Desk

Senior Staff Journalist and Correspondent at B News. Covering breaking global stories, contemporary culture, and modern innovations.

B News Live Search

Search Articles

Type any keyword to instantly search stories across categories.
Send News