"ಮಾಂಜಾ ದಾರ ಮಾರಾಟ ಮಾಡುವುದು ಸಂಪೂರ್ಣ ಕಾನೂನು ಬಾಹಿರ. ನಗರದ ಅಂಗಡಿಗಳಲ್ಲಿ ಈ ದಾರ ಮಾರಾಟವಾಗುತ್ತಿದೆಯೇ ಎಂಬುದನ್ನು ತಕ್ಷಣವೇ ಪರಿಶೀಲಿಸಿ, ದಾಳಿ ನಡೆಸುವಂತೆ ಮಹಾನಗರ ಪಾಲಿಕೆ ಆಯುಕ್ತರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು."ಪಾಲಿಕೆಯಿಂದ ತುರ್ತು ಸಭೆ ಹಾಗೂ ನಿಷೇಧ: ನಗರದಲ್ಲಿ ಮಾಂಜಾ ದಾರದ ಬಳಕೆಯನ್ನು ಸಂಪೂರ್ಣವಾಗಿ ನಿಯಂತ್ರಿಸಲು ಹಾಗೂ ಅಧಿಕೃತವಾಗಿ ನಿಷೇಧ ಹೇರುವ ಕುರಿತು ಮಹಾನಗರ ಪಾಲಿಕೆಯಿಂದ ಶೀಘ್ರದಲ್ಲೇ ವಿಶೇಷ ಸಭೆ ಕರೆಯಲಾಗುವುದು ಎಂದು ಮೇಯರ್ ಸ್ಪಷ್ಟಪಡಿಸಿದ್ದಾರೆ. ಕೇವಲ ನಗರ ಪಾಲಿಕೆ ಅಷ್ಟೇ ಅಲ್ಲದೆ, ಪೊಲೀಸ್ ಇಲಾಖೆಯೊಂದಿಗೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಕಟ್ಟುನಿಟ್ಟಿನ ಹೆಜ್ಜೆ ಇಡಲಾಗುವುದು ಎಂದರು. ಇದೇ ವೇಳೆ, ಮೃತ ಯುವಕ ಧ್ರುವ ಅವರ ಕುಟುಂಬಕ್ಕೆ ಮಹಾನಗರ ಪಾಲಿಕೆ ವತಿಯಿಂದ ವೈಯಕ್ತಿಕವಾಗಿ ಭೇಟಿ ನೀಡಿ ಸಾಂತ್ವನ ಹೇಳಲಾಗುವುದು ಎಂದು ಮೇಯರ್ ಪ್ರೀತಿ ಕಾಮಕರ್ ತಿಳಿಸಿದ್ದಾರೆ. ಸಾರ್ವಜನಿಕರು ಹಾಗೂ ಯುವಕರು ಇಂತಹ ಅಪಾಯಕಾರಿ ದಾರಗಳನ್ನು ಗಾಳಿಪಟ ಹಾರಿಸಲು ಬಳಸಬಾರದು ಎಂದು ಮನವಿ ಮಾಡಿದ್ದಾರೆ.
- ಪ್ರೀತಿ ಕಾಮಕರ್, ಮೇಯರ್, ಬೆಳಗಾವಿ
ಬೆಳಗಾವಿಯಲ್ಲಿ ಮಾಂಜಾ ದಾರಕ್ಕೆ ಯುವಕ ಬಲಿ: ಮಾರಾಟಗಾರರ ವಿರುದ್ಧ ಕಠಿಣ ಕ್ರಮಕ್ಕೆ ಮೇಯರ್ ಪ್ರೀತಿ ಕಾಮಕರ್ ಖಡಕ್ ಸೂಚನೆ
ಬೆಳಗಾವಿಯಲ್ಲಿ ಮಾಂಜಾ ದಾರಕ್ಕೆ ಧ್ರುವ ಎಂಬ ಯುವಕ ಬಲಿಯಾದ ಹಿನ್ನೆಲೆಯಲ್ಲಿ, ಮಾರಾಟಗಾರರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಮೇಯರ್ ಪ್ರೀತಿ ಕಾಮಕರ್ ಎಚ್ಚರಿಸಿದ್ದಾರೆ.
ಈ ಲೇಖನವನ್ನು ಆಲಿಸಿ TTS AI
B News Desk
Senior Staff Journalist and Correspondent at B News. Covering breaking global stories, contemporary culture, and modern innovations.