"ದೇವರ ದಯೆಯಿಂದ ರೈತ ಬಸವರಾಜ್ ಅವರ ಜೀವಕ್ಕೆ ಯಾವುದೇ ಅಪಾಯವಾಗಿಲ್ಲ, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಮುಖ್ಯಮಂತ್ರಿಗಳು ಈ ಘಟನೆಯ ತೀವ್ರತೆಯನ್ನು ಮನಗಾಣಬೇಕು. ರೈತರು ಯಾರಿಗೂ ತೊಂದರೆ ಕೊಡುವ ಉದ್ದೇಶದಿಂದ ಹೋರಾಟಕ್ಕೆ ಬರುವುದಿಲ್ಲ. ತಮ್ಮ ನ್ಯಾಯಯುತ ಹಕ್ಕುಗಳಿಗಾಗಿ ಬೀದಿಗೆ ಇಳಿಯುವ ರೈತರನ್ನು ಸರ್ಕಾರ ಹಾಗೂ ಸಿಎಂ ಗೌರವಿಸುವ ಕೆಲಸ ಮಾಡಬೇಕು."ಪ್ರಸ್ತುತ ಬಿಮ್ಸ್ ಆಸ್ಪತ್ರೆಯ ವೈದ್ಯರ ತಂಡ ರೈತ ಬಸವರಾಜ್ ಅವರಿಗೆ ನಿರಂತರ ಚಿಕಿತ್ಸೆ ನೀಡುತ್ತಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಪ್ರತಿಭಟನೆ ವೇಳೆ ಅಸ್ವಸ್ಥಗೊಂಡಿದ್ದ ರೈತನ ಆರೋಗ್ಯ ವಿಚಾರಿಸಿದ ಚೂನಪ್ಪ ಪೂಜಾರಿ; ಬಿಮ್ಸ್‌ನಲ್ಲಿ ಚಿಕಿತ್ಸೆ
ಬೆಳಗಾವಿ ಪ್ರತಿಭಟನೆ ವೇಳೆ ಪೊಲೀಸರು ವಶಕ್ಕೆ ಪಡೆದ ನಂತರ ಅಸ್ವಸ್ಥಗೊಂಡಿದ್ದ ಜಮಖಂಡಿ ಮೂಲದ ರೈತ ಬಸವರಾಜ್ ಅವರ ಆರೋಗ್ಯವನ್ನು ಚೂನಪ್ಪ ಪೂಜಾರಿ ಬಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ವಿಚಾರಿಸಿದ್ದಾರೆ.
ಈ ಲೇಖನವನ್ನು ಆಲಿಸಿ TTS AI
B News Desk
Senior Staff Journalist and Correspondent at B News. Covering breaking global stories, contemporary culture, and modern innovations.